ನವೆಂಬರ್ ೩೦ - ನವೆಂಬರ್ ತಿಂಗಳ ಮೂವತ್ತನೇದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೩೪ ನೇ (ಅಧಿಕ ವರ್ಷದಲ್ಲಿ ೩೩೫ ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೭೮೨ - ಪ್ಯಾರಿಸ್ನಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನ ಮತ್ತು ಯುನೈಟೆಡ್ ಕಿಂಗ್‍ಡಮ್ನ ಪ್ರತಿನಿಧಿಗಳು ಅಮೇರಿಕದ ಕ್ರಾಂತಿಕಾರಿ ಯುದ್ಧದ ಸಮಾಪ್ತಿಗಾಗಿ ೧೭೮೩ರ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದರು. ೧೯೬೨ - ಸಂಯುಕ್ತ ರಾಷ್ಟ್ರ ಸಂಸ್ಥೆಯ ಸಾರ್ವತ್ರಿಕ ಸಭೆಯು ಯು ಥಾನ್ತ್ ಅನ್ನು ಮೂರನೆ ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿಯಾಗಿ ಆಯ್ಕೆ ಮಾಡಿದರು. ೧೯೬೬ - ಬಾರ್ಬಡೊಸ್ ಯುನೈಟೆಡ್ ಕಿಂಗ್‍ಡಮ್ನಿಂದ ಸ್ವಾತಂತ್ರ್ಯ ಪಡೆಯಿತು. ೧೯೭೪ - ಇಥಿಯೊಪಿಯದಲ್ಲಿ ಆಸ್ಟ್ರೇಲೊಪಿಥೆಕಸ್ ನರಜಾತಿಯ ಒಂದು ಅಸ್ಥಿ (ಲೂಸಿ ಎಂದು ಹೆಸರಾದ) ದೊರಕಿತು. == ಜನನ == ೧೮೫೮ - ಜಗದೀಶ್ ಚಂದ್ರ ಬೋಸ್, ಭಾರತದ ಭೌತಶಾಸ್ತ್ರಜ್ಞ. ೧೮೭೪ - ವಿನ್ಸ್ಟನ್ ಚರ್ಚಿಲ್, ಯುನೈಟೆಡ್ ಕಿಂಗ್‍ಡಮ್‍ನ ಪ್ರಧಾನಮಂತ್ರಿ, ಸಾಹಿತ್ಯದ ನೊಬೆಲ್ ಪ್ರಶಸ್ತಿ ವಿಜೇತ. ೧೮೮೯ - ಎಡ್ಗರ್ ಏಡ್ರಿಯನ್, ಬ್ರಿಟನ್ನ ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ ಜೀವಕ್ರಿಯಶಾಸ್ತ್ರ ತಜ್ಞ. ೧೯೬೭ - ರಾಜೀವ್ ದೀಕ್ಷಿತ್ ,ಸಾಮಾಜಿಕ ಕಾರ್ಯಕರ್ತರು,ಆಜಾದಿ ಬಚಾವೋ ಆಂದೋಲನದ ಹರಿಕಾರ. == ನಿಧನ == ೨೦೧೧ - ರಾಜೀವ್ ದೀಕ್ಷಿತ್ == ರಜೆಗಳು/ಆಚರಣೆಗಳು == ಬಾರ್ಬಡೊಸ್ - ಸ್ವಾತಂತ್ರ್ಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ